Friday, May 31, 2019

ದನಿಯಾಯಿತೇ ಚಿತ್ರ?

ದನಿಯಿಲ್ಲದ ಮಾತು
ಚಲನೆ ಇಲ್ಲದ ನಡಿಗೆ
ಎದ್ದು ಬಂದಂತಿಹನು
ಈ ಪುಟ್ಟ ಪೋರ, ಚಿತ್ರದಿಂದ ಜೀವಕೆ

ಅಸೆಗಳ ಹೊಸೆದು ನಿಂತಿಹನು
ಕೈ ಚಾಚಿಹನು ನನ್ನ ನಿಮ್ಮೆಡೆಗೆ
ಹಂಚಬಯಸಿವೆ ಆ ಕಂಗಳು
ತಮ್ಮ ಕಥೆಯನ್ನು ನೂರಾರು ಜನಕೆ

ಈ ಪುಟ್ಟ ಕಂಗಳಲಿ
ಪ್ರತಿಫಲಿಸುವ ಆಂತರ್ಯ ಕಂಡಿತೇ ನಿಮಗೆ!
ಅಸ್ಪೃಶ್ಯನಲ್ಲ ನಾ, ನನ್ನನು ಪ್ರೀತಿಸಿ-
ಎಂದವನ ಮನದಾಳದ ಕೋರಿಕೆ....



ಚಿತ್ರ : krishna.gummani

No comments:

Post a Comment